Tuesday 28 November 2017

ಕಸದ ರಾಶಿಯಲೊಂದು ಕುಸುಮ. . .


                        ಕಸದ ರಾಶಿಯಿಂದ ಕುಸುಮವೊಂದು ಇಣುಕಿದೆ. ಮಿಣುಕು ದೀಪದ ತುಣುಕೊಂದು ಇರುಳ ಛೇದಿಸಿ ಬೆಳಗಿದಂತೆ. ಕ್ಷಣ ಕ್ಷಣವೂ ಇಲ್ಲಿ ಅಸ್ಥಿತ್ವಕ್ಕೆ ಹೋರಾಟ.  ಜೊತೆಗಿದ್ಕ ಬಳಗ ಕಸದ ನಡುವೆಲ್ಲೋ ಕಳೆದು ಹೋಗಿದೆ.  ಕತ್ತೆತ್ತಿ ನೋಡಿರೆ ಸುತ್ತಲೂ ಹೆಜ್ಜೆಗಳ ಕರ್ಕಶ ಸದ್ದು. ಎದೆಯಲ್ಲಿ ತುಳಿತಕ್ಕಿ ಸಿಕ್ಗುವ ಭಯ. ಬೀಸಿದ ಗಾಳಿಗೆ ಮುಗಿಬಿದ್ದ ಎಲೆಯೊಂದು ಹೂವ ಕಣ್ಣ ಮುಚ್ಚಿತು. ಹೊತ್ತು ಮುಳುಗುವ ಮುನ್ನವೇ ಸುತ್ತೆಲ್ಲ ಅಂಧಕಾರ. ಮತ್ತೆ ಗಾಳಿ ಬೀಸಲಿ ಎಂಬ ಸಣ್ಣ ಹಂಬಲ.  ಆಗೋ ನೋಡು. ಬೀಸಿತು ಗಾಳಿ. ನಕ್ಕಿತು ಹೂವು, ಕಾರಣವಾ ನೀವೇ ಕೇಳಿ. . . !

No comments:

Post a Comment