Wednesday 13 December 2017

ಹೆಜ್ಜೆ ಮೂಡದ ಹಾದಿ. . .



                            ಬಾ ಜೊತೆಗೆ ಸಾಗೋಣ, ಒಂದಷ್ಟು ಗಾವುದ. ಮಾತು ಮಾತುಗಳಲಿ ಮೌನವೆಂಬುದ ಮರೆತು. ಮೂಡದಿರಲಿ  ಹೆಜ್ಜೆಯ ಗುರುತು, ಬಳಸಿ ಬಂದಾರು ಹತ್ತಾರು ಮಂದಿ. ಅಂಟದಿರಲಿ ಹಾಸಿದ ಹೂವಿನ ಬಣ್ಣ, ನೆನಪುಗಳು ಎಂದಿಗೂ ತಿಳಿನೀರ ಬಿಂಬದಂತೆ.  ಸಾಗಿ ಬಂದ ತಿರುವುಗಳೇ, ಬದುಕಿನ ರೋಚಕತೆಯ ಮೂಲ. ತೀರದ ದಾಹಕೂ, ಇಲ್ಲ ಸಲ್ಲದ ಮೋಹಕೂ - ತಿರುಗಿ ನೋಡಲೊಲ್ಲದು ಕಾಲ. . . 

Tuesday 5 December 2017

ಹೆಜ್ಜೆ ಬೆಸೆದು. . .





                         ಹೆಜ್ಜೆಯೊಡನೆ ಹೆಜ್ಜೆಯಿಡು, ಕರೆದೊಯ್ಯುವೆ ಬದುಕ ಪಥದಲ್ಲಿ. ಗೆಜ್ಜೆ ಸದ್ದು ಕೇಳದಂತೆ, ಮೆಲ್ಲ ಮೆಲ್ಲಗೆ ಸಾಗುವ - ಗದ್ದಲಕೆ ಮೌನ ಮುರಿದೀತುಉದುರಿದ ಎಲೆಗಳೇ ಇಲ್ಲಿ ಹೂವ ಹಾದಿಯಂತೆ. ತಣ್ಣನೆ ಗಾಳಿಗೆ ಮೌನ ಮಾತಾದೀತು. ನಿಂತ ಮರವೊಂದು ದೃಷ್ಟಿ ತೆಗೆದೀತು. ಸೃಷ್ಟಿಯ ಸೋಜಿಗಕೆ ಯಾವ ಒಲವಿನ ಹಂಗು? ಅದು ಎಲ್ಲದಕ್ಕೂ ಎತ್ತರ. ನೀಡದೆಂದಿಗೂ ಉತ್ತರ. ಮೆಲ್ಲಗೆ ಆಲಿಸುವೆಯಾ, ಇಲ್ಲಿ ಇಂಚರವೂ ಹಾಡಾದೀತು.