Tuesday 26 September 2017

ಮಳೆ ನಿಂತು ಹೋದ ಮೇಲೆ. . .

Add caption

ಮಳೆಯೊಂದು ಬಂದು ಹೋಗಿದೆ. ಕುರುಹುಗಳೆಲ್ಲವ ನೆನಪ ನೌಕೆಗೆ ನೂಕಿಬಿಟ್ಟು. ಪ್ರತಿ ಹೆಜ್ಜೆ ಇಟ್ಟಾಗಲೂ ಪುಳಕ.  ಅಲ್ಲಲ್ಲಿ ಕಾಣೋ ಒಬ್ಬಿಬ್ಬರು. ಕೆಂಪು, ಕೆಂಪಿನ ಪಕ್ಕ ನೀಲಿ, ಅದರ ಜೊತೆಗೆ ಹಳದಿ, ಅಲ್ಲಲ್ಲಿ ಹಸಿರು, ಮತ್ತೆಲ್ಲೋ ಗುಲಾಬಿಬಣ್ಣ ಬಣ್ಣದ ಮನೆಗಳು - ಬಹುಷಃ ನಗರ ನಿರ್ಮಿಸಿದ್ದು ಅಂಬೆಗಾಲಿಟ್ಟ ಕಿನ್ನರನೇನೋ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು, ರಂಗಿನೋಕುಳಿ ಎರಚಿದಂತೆ. ಅಲ್ಲೋ ಇಲ್ಲೋ ಕಾಣುವ ಜನತೆಗೆ ನಾವೇ ಕುತೂಹಲದ ಕೇಂದ್ರಬಿಂದುಕೆಲವೊಂದು ಹಾದಿಗಳಲ್ಲಂತೂ ನೀರವತೆ. ಸುಮ್ಮನೆ ನಿಂತರೆ, ಹೆಜ್ಜೆ ಸಪ್ಪಳದಳಲ್ಲೂ ಹಾಡು ಕೇಳೀತು. ಎಲ್ಲ ಗೊಂದಲಗಳನ್ನೂ ಗಂಟು ಮೂಟೆ ಕಟ್ಟಿಟ್ಟು, ನಗರಿಗೆ ಬಂದು ನೆಲೆಸಿದರಾಯ್ತು. ಬಣ್ಣದ ಲೋಕದಲ್ಲಿ ಸಣ್ಣ ಮನೆಯೊಂದು ಸಾಕು - ಕಣ್ಣ ನೋಟಗಳಲಿ ಕವಿತೆ ಹೊಮ್ಮೀತು.

No comments:

Post a Comment