ಅಲ್ಲೊಂದು ಗಾಜಿನ ಮನೆಯಿದೆ. ಒಳಗೆ ಕಾಲಿಟ್ಟರೆ ಅದೊಂದು ವಿಸ್ಮಯ ಲೋಕ . ಕಲಾವಿದರಿಗೆ ಸಗ್ಗವೀಡು. ಸಹಸ್ರ ಕುಂಚಗಳ ಬಣ್ಣ ಅಲ್ಲಿ ಕರಗಿ ಹೋಗಿದೆ. ಬಂದು ಹೋದ ಹೆಜ್ಜೆಗಳ ಲೆಕ್ಕವೂ ಸಿಗಲಿಲ್ಲ. ಘಟಾನುಘಟಿ ಕಲಾವಿದರೆಲ್ಲ ಕುರುಹ ಬಿಟ್ಟು ಹೋದರು. ಆದರೇನಂತೆ? ಹೊರಗಿನ ಅಂಗಳದಲ್ಲಿ ಕುಳಿತ ಹಕ್ಕಿಗೆ ಯಾವುದೇ ಪರಿವಿಲ್ಲ. ಅದು ತನ್ನದೇ ಜಗದಲ್ಲಿ ತಲ್ಲೀನ. ಬಿಸಿಲು ಬಿದ್ದರೇನು. ಮಳೆ ಸುರಿದರೇನು. ರೆಕ್ಕೆ ಬಿಚ್ಚಿದರೆ, ಕಾಲ ಚಕ್ರಗಳೇ ಒಮ್ಮೆ ನಿಂತಾವು ( ಹಕ್ಕಿಯ ಸುಪ್ತ ಜಗದಲ್ಲಿ).
No comments:
Post a Comment