Wednesday, 4 October 2017

ಪಾಳು ಬಿದ್ದ ಮನೆಯ ಹೂವು. . .



                  ಮಹಾಯುದ್ಧವನು ಕಂಡ ಪಾಳು ಬಿದ್ದ ಮನೆಯೊಂದಿದೆ.  ಮನೆ ನೋಡಲು ಬಂದವರು ಭೂತ ಬಂಗಲೆ ಎಂದು ಕರೆದಾಡಿ ನಕ್ಕಿದ್ದುಂಟು. ಕಡಿಮೆ ಬಾಡಿಗೆಗೆ ಸಿಕ್ಕಿದ್ದಕ್ಕೆ  ಖುಷಿಯೂ ಪಟ್ಟದ್ದುಂಟು. ಗುಂಡಿನ ಏಟು ಮಾಡಿದ  ಘಾಯಗಳು ಅಲ್ಲಲ್ಲಿ ಕಂಡಾವು.  ನೆನಪು ಮಾಸದಿರಲಿ ಎಂದು ಬಣ್ಣವನ್ನೂ ಬಳಿದಿಲ್ಲ. ಬಿದ್ದ ಸಾವಿರಾರು ಮಳೆಗಳಿಗೆ ಗೋಡೆ ಕುಸಿದಿಲ್ಲ.  ಅಳಿಸಿಹೋದ ಬರಹಗಳಿಗೆ ಯಾವುದೇ ಹೆಸರಿಲ್ಲ. ಮೌನ ಕರಗುತ್ತದೆ, ಉಸಿರ ಬಿಸಿ ಬೆಸುಗೆಗೆ. ಹೂವು ನಗುತ್ತದೆ, ಮುಸ್ಸಂಜೆಯ ಬಿಗಿ ಅಪ್ಪುಗೆಗೆ.  ಜಗುಲಿಯಲ್ಲಿ ಬಿದ್ದಿದ್ದ ಬಣ್ಣದ ಛತ್ರಿ, ಹನಿಗಳ ಬೆನ್ನಿಗೇರಿಸಿ ಕಣ್ಣ ತೆರೆಯುತ್ತದೆ. . . ."


Note: On a rainy day, when I came back home with umbrella, colors of evening looked distinct. They seemed like they are in sync with colors of umbrella. Then i arranged the frame in such a way to get old house in background, focusing for colors of Umbrella.

No comments:

Post a Comment