ನೀಲ
ನೀಲ ಗಗನ, ಕೈ ಚಾಚಿದಷ್ಟು
ಹಬ್ಬುತಿದೆ. ಹತ್ತು
ದೇಶಗಳಲ್ಲಿ ಹರಿವ ದಾನುಬೆ ನದಿಗೆ,
ಇಲ್ಲೊಂದು ಸೇತುವೆ ಕಟ್ಟಲಾಗಿದೆ. ೧೬೮ ವರ್ಷಗಳಿಂದ ಆ
ಸೇತುವೆ ಕದಲದೆ ನಿಂತಿದೆ. ಮುಗಿಲಿಗೇನಂತೆ? ಬಣ್ಣಗಳ ಬದಲಿಸುತ್ತ ಬದುಕುತ್ತದೆ. ಮೋಡಗಳೋ, ಮನಸ್ಸಿಗೆ ಬಂದಂತೆ ಚಲಿಸುತ್ತವೆ. ಆದರೆ, ನದಿಯ ನಡುವೆ ನೆಲೆಯೂರಿ
ನಿಂತ ಸೇತುವೆಗೆ, ತನ್ನದೇ ಆದ ಜವಾಬ್ಧಾರಿ. ಕದಲದೆ,
ಬಣ್ಣ ಬದಲಿಸದೆ, ಬಿದ್ದ ಮಳೆಗೂ ಮಂಜಿಗೂ ನಡುಗಡೆ, ದೃಢವಾಗಿ ನಿಲ್ಲಬೇಕು. ಪಯಣಿಗನ ಮನ ಗೆಲ್ಲಬೇಕು. . .
No comments:
Post a Comment