ಬಾ ಜೊತೆಗೆ ಸಾಗೋಣ, ಒಂದಷ್ಟು ಗಾವುದ. ಮಾತು ಮಾತುಗಳಲಿ ಮೌನವೆಂಬುದ ಮರೆತು. ಮೂಡದಿರಲಿ ಹೆಜ್ಜೆಯ ಗುರುತು, ಬಳಸಿ ಬಂದಾರು ಹತ್ತಾರು ಮಂದಿ. ಅಂಟದಿರಲಿ ಹಾಸಿದ ಹೂವಿನ ಬಣ್ಣ, ನೆನಪುಗಳು ಎಂದಿಗೂ ತಿಳಿನೀರ ಬಿಂಬದಂತೆ. ಸಾಗಿ ಬಂದ ತಿರುವುಗಳೇ, ಬದುಕಿನ ರೋಚಕತೆಯ ಮೂಲ. ತೀರದ ದಾಹಕೂ, ಇಲ್ಲ ಸಲ್ಲದ ಮೋಹಕೂ - ತಿರುಗಿ ನೋಡಲೊಲ್ಲದು ಕಾಲ. . .
No comments:
Post a Comment