ಹೆಜ್ಜೆಯೊಡನೆ
ಹೆಜ್ಜೆಯಿಡು, ಕರೆದೊಯ್ಯುವೆ ಬದುಕ ಪಥದಲ್ಲಿ. ಗೆಜ್ಜೆ
ಸದ್ದು ಕೇಳದಂತೆ, ಮೆಲ್ಲ ಮೆಲ್ಲಗೆ ಸಾಗುವ - ಗದ್ದಲಕೆ ಮೌನ ಮುರಿದೀತು.
ಉದುರಿದ ಎಲೆಗಳೇ ಇಲ್ಲಿ ಹೂವ ಹಾದಿಯಂತೆ. ತಣ್ಣನೆ
ಗಾಳಿಗೆ ಮೌನ ಮಾತಾದೀತು. ನಿಂತ
ಮರವೊಂದು ದೃಷ್ಟಿ ತೆಗೆದೀತು. ಸೃಷ್ಟಿಯ ಸೋಜಿಗಕೆ ಯಾವ ಒಲವಿನ ಹಂಗು?
ಅದು ಎಲ್ಲದಕ್ಕೂ ಎತ್ತರ. ನೀಡದೆಂದಿಗೂ ಉತ್ತರ. ಮೆಲ್ಲಗೆ ಆಲಿಸುವೆಯಾ, ಇಲ್ಲಿ ಇಂಚರವೂ ಹಾಡಾದೀತು.
No comments:
Post a Comment