Tuesday, 31 October 2017

ಸುಪ್ತ ಜಗತ್ತು. . .



            ಅಲ್ಲೊಂದು ಗಾಜಿನ ಮನೆಯಿದೆಒಳಗೆ ಕಾಲಿಟ್ಟರೆ ಅದೊಂದು ವಿಸ್ಮಯ ಲೋಕ . ಕಲಾವಿದರಿಗೆ ಸಗ್ಗವೀಡುಸಹಸ್ರ ಕುಂಚಗಳ ಬಣ್ಣ ಅಲ್ಲಿ ಕರಗಿ ಹೋಗಿದೆಬಂದು ಹೋದ ಹೆಜ್ಜೆಗಳ ಲೆಕ್ಕವೂ ಸಿಗಲಿಲ್ಲ. ಘಟಾನುಘಟಿ ಕಲಾವಿದರೆಲ್ಲ ಕುರುಹ ಬಿಟ್ಟು ಹೋದರು. ಆದರೇನಂತೆಹೊರಗಿನ ಅಂಗಳದಲ್ಲಿ ಕುಳಿತ ಹಕ್ಕಿಗೆ ಯಾವುದೇ ಪರಿವಿಲ್ಲ. ಅದು ತನ್ನದೇ ಜಗದಲ್ಲಿ ತಲ್ಲೀನ. ಬಿಸಿಲು ಬಿದ್ದರೇನು. ಮಳೆ ಸುರಿದರೇನು. ರೆಕ್ಕೆ ಬಿಚ್ಚಿದರೆ, ಕಾಲ ಚಕ್ರಗಳೇ ಒಮ್ಮೆ ನಿಂತಾವು ( ಹಕ್ಕಿಯ ಸುಪ್ತ ಜಗದಲ್ಲಿ).

Thursday, 26 October 2017

From life to lifeless



ನಗರದ ಹಕ್ಕಿಯ ದಿಟ್ಟ ನೋಟ, 
ಸುತ್ತ ಹನಿಗಳ ಸುಪ್ತ ಸಂಘರ್ಷ,
ಕಳೆದುಹೋದ ಇಂಚರಕೆ ಜೀವ ಬಂದೀತೆ?
ಕಲ್ಲುಗಳ ಕಹಳೆಯದು ಹುರುಪು ತಂದೀತೇ?

ಮೌನ ಸಮ್ಮೇಳನಕೆ, ತೊರೆದ ನೆನಪುಗಳ ಕಾವಲು,
ಬಿರಿಯಬೇಕಿದೆ, ಅಂತರಗಳ ತಂದಿರುವ ಬಾಗಿಲು..

In a dream land. . .



                   Church in the small island of Bled lake is considered as famous place in Slovenia for weddings. It is considered good luck for the groom to carry his bride up the 99 steps on the day of their wedding, before ringing the bell and making a wish inside the church. Boats approaching the church on a Sunday morning seen through the lens. . . 

Wednesday, 25 October 2017

ಬಿಸಿಲ ಪಿಸುಮಾತು. . .




"ಬಿರು ಬಿಸಿಲಿದೆ. ಹಾಸಿದಂತೆ ಹಸಿರಿದೆ. ಮಾತಿಗೆ ಕುಳಿತರೆ, ಮುಸ್ಸಂಜೆಯಾದೀತು, ಇರುಳೂ ಕವಿದೀತು. ಪಿಸುಮಾತಿನಲಿ, ತುಸು ಹೊತ್ತು ಕಳೆಯೋಣ. ನೆರಳೂ ಒಮ್ಮೆ ಬೆಳಕ ಸವಿದೀತು. ಕಟ್ಟಡ ಕದಲದೆ ನಿಂತಿದೆ. ಕಿಟಕಿಯಾಚೆಯಿಂದ ಕಣ್ಣುಗಳು ಇಣುಕಿವೆಪ್ರಜ್ಞೆ ಬೇಕೇನು? ಪದಗಳಿಗೆ ಮಾಧುರ್ಯದ ಅಲಂಕಾರ ತೊಡಿಸಲು? ಮಾತು ಮಾತಿನಲ್ಲಿ ಒಲವ ಸಮೀಕರಣಗಳ ಬಿಡಿಸಲು?"

Note: Photo taken near Homme Museum, Paris. A couple in conversation. . . 

Tuesday, 17 October 2017

City of lights - Paris. . .



                  Being beautifully illuminated by light isn’t the reason behind the name “city of lights”. Paris was the first European country to adapt gas street lighting. From the top of Eiffel tower, city looks as if it is illuminated by lights. Trials of light, different ranges of illumination and vivid colors combine to give an infinite effect. One such sky view, captured with 15 second exposure

Wednesday, 4 October 2017

ಪಾಳು ಬಿದ್ದ ಮನೆಯ ಹೂವು. . .



                  ಮಹಾಯುದ್ಧವನು ಕಂಡ ಪಾಳು ಬಿದ್ದ ಮನೆಯೊಂದಿದೆ.  ಮನೆ ನೋಡಲು ಬಂದವರು ಭೂತ ಬಂಗಲೆ ಎಂದು ಕರೆದಾಡಿ ನಕ್ಕಿದ್ದುಂಟು. ಕಡಿಮೆ ಬಾಡಿಗೆಗೆ ಸಿಕ್ಕಿದ್ದಕ್ಕೆ  ಖುಷಿಯೂ ಪಟ್ಟದ್ದುಂಟು. ಗುಂಡಿನ ಏಟು ಮಾಡಿದ  ಘಾಯಗಳು ಅಲ್ಲಲ್ಲಿ ಕಂಡಾವು.  ನೆನಪು ಮಾಸದಿರಲಿ ಎಂದು ಬಣ್ಣವನ್ನೂ ಬಳಿದಿಲ್ಲ. ಬಿದ್ದ ಸಾವಿರಾರು ಮಳೆಗಳಿಗೆ ಗೋಡೆ ಕುಸಿದಿಲ್ಲ.  ಅಳಿಸಿಹೋದ ಬರಹಗಳಿಗೆ ಯಾವುದೇ ಹೆಸರಿಲ್ಲ. ಮೌನ ಕರಗುತ್ತದೆ, ಉಸಿರ ಬಿಸಿ ಬೆಸುಗೆಗೆ. ಹೂವು ನಗುತ್ತದೆ, ಮುಸ್ಸಂಜೆಯ ಬಿಗಿ ಅಪ್ಪುಗೆಗೆ.  ಜಗುಲಿಯಲ್ಲಿ ಬಿದ್ದಿದ್ದ ಬಣ್ಣದ ಛತ್ರಿ, ಹನಿಗಳ ಬೆನ್ನಿಗೇರಿಸಿ ಕಣ್ಣ ತೆರೆಯುತ್ತದೆ. . . ."


Note: On a rainy day, when I came back home with umbrella, colors of evening looked distinct. They seemed like they are in sync with colors of umbrella. Then i arranged the frame in such a way to get old house in background, focusing for colors of Umbrella.