ಕಸದ ರಾಶಿಯಿಂದ ಕುಸುಮವೊಂದು ಇಣುಕಿದೆ. ಮಿಣುಕು ದೀಪದ ತುಣುಕೊಂದು ಇರುಳ ಛೇದಿಸಿ ಬೆಳಗಿದಂತೆ. ಕ್ಷಣ ಕ್ಷಣವೂ ಇಲ್ಲಿ ಅಸ್ಥಿತ್ವಕ್ಕೆ ಹೋರಾಟ. ಜೊತೆಗಿದ್ಕ ಬಳಗ ಕಸದ ನಡುವೆಲ್ಲೋ ಕಳೆದು ಹೋಗಿದೆ. ಕತ್ತೆತ್ತಿ ನೋಡಿರೆ ಸುತ್ತಲೂ ಹೆಜ್ಜೆಗಳ ಕರ್ಕಶ ಸದ್ದು. ಎದೆಯಲ್ಲಿ ತುಳಿತಕ್ಕಿ ಸಿಕ್ಗುವ ಭಯ. ಬೀಸಿದ ಗಾಳಿಗೆ ಮುಗಿಬಿದ್ದ ಎಲೆಯೊಂದು ಹೂವ ಕಣ್ಣ ಮುಚ್ಚಿತು. ಹೊತ್ತು ಮುಳುಗುವ ಮುನ್ನವೇ ಸುತ್ತೆಲ್ಲ ಅಂಧಕಾರ. ಮತ್ತೆ ಗಾಳಿ ಬೀಸಲಿ ಎಂಬ ಸಣ್ಣ ಹಂಬಲ. ಆಗೋ ನೋಡು. ಬೀಸಿತು ಗಾಳಿ. ನಕ್ಕಿತು ಹೂವು, ಕಾರಣವಾ ನೀವೇ ಕೇಳಿ. . . !
Tuesday, 28 November 2017
ಕಸದ ರಾಶಿಯಲೊಂದು ಕುಸುಮ. . .
ಕಸದ ರಾಶಿಯಿಂದ ಕುಸುಮವೊಂದು ಇಣುಕಿದೆ. ಮಿಣುಕು ದೀಪದ ತುಣುಕೊಂದು ಇರುಳ ಛೇದಿಸಿ ಬೆಳಗಿದಂತೆ. ಕ್ಷಣ ಕ್ಷಣವೂ ಇಲ್ಲಿ ಅಸ್ಥಿತ್ವಕ್ಕೆ ಹೋರಾಟ. ಜೊತೆಗಿದ್ಕ ಬಳಗ ಕಸದ ನಡುವೆಲ್ಲೋ ಕಳೆದು ಹೋಗಿದೆ. ಕತ್ತೆತ್ತಿ ನೋಡಿರೆ ಸುತ್ತಲೂ ಹೆಜ್ಜೆಗಳ ಕರ್ಕಶ ಸದ್ದು. ಎದೆಯಲ್ಲಿ ತುಳಿತಕ್ಕಿ ಸಿಕ್ಗುವ ಭಯ. ಬೀಸಿದ ಗಾಳಿಗೆ ಮುಗಿಬಿದ್ದ ಎಲೆಯೊಂದು ಹೂವ ಕಣ್ಣ ಮುಚ್ಚಿತು. ಹೊತ್ತು ಮುಳುಗುವ ಮುನ್ನವೇ ಸುತ್ತೆಲ್ಲ ಅಂಧಕಾರ. ಮತ್ತೆ ಗಾಳಿ ಬೀಸಲಿ ಎಂಬ ಸಣ್ಣ ಹಂಬಲ. ಆಗೋ ನೋಡು. ಬೀಸಿತು ಗಾಳಿ. ನಕ್ಕಿತು ಹೂವು, ಕಾರಣವಾ ನೀವೇ ಕೇಳಿ. . . !
Tuesday, 21 November 2017
ಹುದುಗಿ ಹೋಗದಿರಲಿ . . .
Dissolving memories. . . |
ಹುದುಗಿ ಹೋಗದಿರಲಿ ಕನಸುಗಳು. ನಿಂತ ನೀರಿನಲ್ಲಿ ಮೂಡುವ ಕನಸಂತೆ ಬಿಂಬಗಳು. ಒಮ್ಮೆ ಹಸಿರಾಗಿ, ಮತ್ತೊಮ್ಮೆ ಮೊಬ್ಬಾಗಿ ನಿಧಾನ ಗತಿಯಲ್ಲಿ ಮರೆಯಾಗುತ್ತವೆ. ಮರೆಯಾಗುವ ಮುನ್ನ, ನೆನಪಾಗಬೇಕು. ಬೆಳಕಾಗಬೇಕು, ಬದುಕಾಗಬೇಕು. ಉಳಿದಿರುವ ಕ್ಷಣಗಳು ಹೆಚ್ಚಿಲ್ಲ. ಪಾರದರ್ಶಕ ನಿಲುವುಗಳನ್ನು ಮನಸ್ಸು ಎಂದಿಗೂ ಮುಚ್ಚಿಲ್ಲ. ಅಚ್ಚಳಿಯದೆ ಅಚ್ಚಾಗಲಿ, ಹಚ್ಚಿದ ಕಿಚ್ಚಲಿಹ ಮೆಚ್ಚಿನ ನೆನಪುಗಳ ಗುಚ್ಛ.
Thursday, 9 November 2017
Buildings, Bridge, Budapest & Blue. . .
ನೀಲ
ನೀಲ ಗಗನ, ಕೈ ಚಾಚಿದಷ್ಟು
ಹಬ್ಬುತಿದೆ. ಹತ್ತು
ದೇಶಗಳಲ್ಲಿ ಹರಿವ ದಾನುಬೆ ನದಿಗೆ,
ಇಲ್ಲೊಂದು ಸೇತುವೆ ಕಟ್ಟಲಾಗಿದೆ. ೧೬೮ ವರ್ಷಗಳಿಂದ ಆ
ಸೇತುವೆ ಕದಲದೆ ನಿಂತಿದೆ. ಮುಗಿಲಿಗೇನಂತೆ? ಬಣ್ಣಗಳ ಬದಲಿಸುತ್ತ ಬದುಕುತ್ತದೆ. ಮೋಡಗಳೋ, ಮನಸ್ಸಿಗೆ ಬಂದಂತೆ ಚಲಿಸುತ್ತವೆ. ಆದರೆ, ನದಿಯ ನಡುವೆ ನೆಲೆಯೂರಿ
ನಿಂತ ಸೇತುವೆಗೆ, ತನ್ನದೇ ಆದ ಜವಾಬ್ಧಾರಿ. ಕದಲದೆ,
ಬಣ್ಣ ಬದಲಿಸದೆ, ಬಿದ್ದ ಮಳೆಗೂ ಮಂಜಿಗೂ ನಡುಗಡೆ, ದೃಢವಾಗಿ ನಿಲ್ಲಬೇಕು. ಪಯಣಿಗನ ಮನ ಗೆಲ್ಲಬೇಕು. . .
Subscribe to:
Posts (Atom)