“ಹೆಜ್ಜೆಗೊಂದು
ಬಿಂಬ. ಬಿಂಬ ಮೂಡಿದ ಹಾದಿಯತ್ತ
ಹೊರಳಿವೆ ಪುಟ್ಟ ಕಂಗಳು. ಎಲ್ಲೆಡೆ ಜನಸಂದಣಿ. ಮುಸ್ಸಂಜೆಗೊಂಡು ಹಬ್ಬ. ಹಿಡಿದ ಕೈಗಳಲ್ಲಿ ಸೋಲುವ ಮಾತಿಲ್ಲ. ಸಂಜೆಗಳು ಸಾಕ್ಷಿಯಾಗಬಲ್ಲವು, ಇಂತಹ ಅನನ್ಯ ಬಾಂಧವ್ಯಗಳಿಗೆ.
ಪ್ರತಿ ಹೆಜ್ಜೆಗೂ ಅನುಭವದ ಬಣ್ಣ ಅಂಟಬಹುದು. ಎಲ್ಲ
ಬಣ್ಣಗಳ ತೊಟ್ಟು ಬದುಕು ಕಂಗೊಳಿಸಬಹುದು - ಹಾದಿಗಳು ಮಾತ್ರ ಬಿದ್ದಲ್ಲೇ ಬಿದ್ದಿವೆ. ಪ್ರತಿದಿನವೂ ಹೊಸ ನೋಟ ಕಾಣುತ್ತ.
ಗೆಜ್ಜೆಸದ್ದುಗಳ ಕೇಳುತ್ತ.
No comments:
Post a Comment