ಭೋರ್ಗರೆಯುವ
ಅಲೆಗಳು. ನೋಡು, ನೋಡಲ್ಲಿ, ದೋಣಿಯೊಂದು ಸಾಗುತಿದೆ. ನೀಲ ನಭಕೂ, ನೀಲಿ
ಕಡಲಿಗೂ ಇಲ್ಲಿ ಕಾಣದೊಂದು ಅಂತರ. ಬಿಸಿಲ ಬೇಗೆ ಎಷ್ಟಿದ್ದರೇನು? ದೂರ ತೀರವೊಂದಿದೆಯಲ್ಲ. ಕಾಣದಿದ್ದರೇನಂತೆ? ಚಾಚಿದ ಮುಗಿಲ ಹಾರೈಕೆಯಿಹುದಲ್ಲ. ಕಡಲ ದಾಟುವ ಕಾತರತೆಯಿಹುದಲ್ಲ. ಬೆಳಕಿರುವಾಗಷ್ಟೇ ಬದುಕಲ್ಲ!
ಕಡಲಿರುವಷ್ಟೇ ಮುಗಿಲಲ್ಲ!