Add caption |
ಮಳೆಯೊಂದು
ಬಂದು ಹೋಗಿದೆ. ಕುರುಹುಗಳೆಲ್ಲವ ನೆನಪ ನೌಕೆಗೆ ನೂಕಿಬಿಟ್ಟು. ಪ್ರತಿ ಹೆಜ್ಜೆ ಇಟ್ಟಾಗಲೂ ಪುಳಕ. ಅಲ್ಲಲ್ಲಿ ಕಾಣೋ ಒಬ್ಬಿಬ್ಬರು. ಕೆಂಪು, ಕೆಂಪಿನ ಪಕ್ಕ ನೀಲಿ, ಅದರ
ಜೊತೆಗೆ ಹಳದಿ, ಅಲ್ಲಲ್ಲಿ ಹಸಿರು, ಮತ್ತೆಲ್ಲೋ ಗುಲಾಬಿ - ಬಣ್ಣ
ಬಣ್ಣದ ಮನೆಗಳು - ಬಹುಷಃ ಈ ನಗರ ನಿರ್ಮಿಸಿದ್ದು
ಅಂಬೆಗಾಲಿಟ್ಟ ಕಿನ್ನರನೇನೋ. ಪುಟ್ಟ ಪುಟ್ಟ ಹೆಜ್ಜೆಯಿಟ್ಟು, ರಂಗಿನೋಕುಳಿ ಎರಚಿದಂತೆ. ಅಲ್ಲೋ ಇಲ್ಲೋ ಕಾಣುವ ಜನತೆಗೆ ನಾವೇ ಕುತೂಹಲದ ಕೇಂದ್ರಬಿಂದು. ಕೆಲವೊಂದು
ಹಾದಿಗಳಲ್ಲಂತೂ ನೀರವತೆ. ಸುಮ್ಮನೆ ನಿಂತರೆ, ಹೆಜ್ಜೆ ಸಪ್ಪಳದಳಲ್ಲೂ ಹಾಡು ಕೇಳೀತು. ಎಲ್ಲ
ಗೊಂದಲಗಳನ್ನೂ ಗಂಟು ಮೂಟೆ ಕಟ್ಟಿಟ್ಟು,
ಈ ನಗರಿಗೆ ಬಂದು ನೆಲೆಸಿದರಾಯ್ತು. ಬಣ್ಣದ
ಲೋಕದಲ್ಲಿ ಸಣ್ಣ ಮನೆಯೊಂದು ಸಾಕು
- ಕಣ್ಣ ನೋಟಗಳಲಿ ಕವಿತೆ ಹೊಮ್ಮೀತು.